Tuesday, May 10, 2011

ನನ್(ನನ್ನಪ್ಪನ) ಹತ್ರ ದುಡ್ಡ ಇದ್ದಿದ್ರೆ?


ಇದನ್ನೇನು ಅಳ್ತಾ ಬರೀಬೇಕೋ, ನಗಬೇಕೋ ತಿಳಿತಾ ಇಲ್ಲ ನಂಗೆ.... ೨೫ ವರ್ಷ ನನಗೀಗ . ಡಾಕ್ಟರ .. ಆದ್ರೆ ಕೈಯ್ಯಲ್ಲಿ ನಯಾ ಪೈಸಾ ಇಲ್ಲ. ಎಲ್ಲಾರು ಅಂತಾರೆ ನೀವೇನ್ ಡಾಕ್ಟರ್ ಪ್ಪ , ನಿಮ್ಗೆನ್ ಕಮ್ಮಿ ಅಂತ. ಆಗ ನಮಗೇನ ಉರಿಯತ್ತಲ್ಲ, ಅದನ್ನ ಎಂಥ PPI ಆಗಲಿ antacid ಆಗಲಿ ಕಮ್ಮಿ ಮಾಡಕ್ ಸಾಧ್ಯಾನೆ ಇಲ್ಲ .. ಅವರಜ್ಜಿ! ನಮ್ಮ PUC ಫ್ರೆಂಡ್ಸ್ ಗಳು ನಮ್ಮಿಂದಲೇ ಕಾಪಿ ಹೊಡ್ದು, ಸಾವರಾರ್ಗಟ್ಲೆ rank ತೆಗದು, ಹಿಂದೆಲ್ಲೂ ಕಾಣದ ಕೇಳದ ಜಾಗಗಳಿಗೆ ಹೋಗಿ ಅಂತು ಇಂತೂ BE ಪಾಸ್ ಆಗಿ , ೨೨- ೨೩ ಕ್ಕೆ ಇಪ್ಪತ್ತೋ ಮೂವತ್ತೋ ಸಾವ್ರ ಗಳಸೋಕೆ ಶುರು ಮಾಡ್ತಾರೆ, ಎಲ್ಲರ ಕೈಯಲ್ಲೂ ಒಂದೊಂದು ಟಚ್ ಸ್ಕ್ರೀನ್ ಮೊಬೈಲ್ , ಪಕ್ಕದಲ್ಲೊಂದು ಹಕ್ಕಿ , ವೀಕೆಂಡ್ಸ್ ಆಯ್ತಂದ್ರೆ ಗುಂಡು, ದಮ್ಮು, ಶಿವ ಹೋಗುತಿದ್ದೆ ರೋಡಿನಲಿ ಅಂತ ಹಾಡ್ತಾರೆ ....
ಇನ್ನು ನಾವೋ ಬಡಪಾಯಿ ಡಾಕ್ಟರ ಗಳು , ಡಿಗ್ರಿ ಮುಗ್ಸೋಕೆ ತಲೆ ಕೂದಲು ಉದ್ರ್ಹೊಗಿರ್ತವೆ , BY ಚಾನ್ಸ್ ಉಳ್ಕೊಂದಿದ್ರೆ ಬಿಳಿಯಾಗಿರ್ತಾವೆ.. ಇನ್ನು ಹುಡುಗಿ , ರಮ್ಮು ದಮ್ಮು ಇವಕ್ಕೆಲ್ಲ ಕಾಸ್ ಎಲ್ಲಿಂದ ಬರಬೇಕು ಸ್ವಾಮಿ... ರಮ್ಮು ದಮ್ಮು ಹುಡುಗಿ ಹೋಗ್ಲಿ ಬಿಡಿ , ATLEAST BRANDED ಬಟ್ಟೆ, ಚಪ್ಪಲಿ WATCH ಗಾದ್ರು ದುಡ್ಡ ಬೇಡ್ವಾ ?? ಫೈನಲ್ mbbs ಮುಗ್ಸೋತನಕ ಅಪ್ಪನ ಹತ್ರ ಮುಲಾಜ್ ಇಲ್ದೆ ದುಡ್ಡ ಕೇಳಬಹುದು , INTERNSHIP ಲ್ಲಿ ಸರ್ಕಾರ ಪುಡಿಗಾಸು ಕೊಡತ್ತೆ , ಹೊಟ್ಟೆಗಾದ್ರೆ ನೆತ್ತಿಗಿಲ್ಲ ನೆತ್ತಿಗಾದ್ರೆ ಹೊಟ್ಟೆಗಿಲ್ಲ,, ಮತ್ತೆ ನಾಚ್ಕೆ ಬಿಟ್ಟು ಅಪ್ಪನ ಹತ್ರ ಕೈ ಒಡ್ದಬೇಕು... ಹಂಗು ಹಿಂಗು ಇಂಟರ್ನ್ಶಿಪ್ ಮುಗಿಯತ್ತೆ , ಅದಾದ ನಂತರ ಶುರು ಆಗತ್ತೆ ನೋಡಿ ಪರಾವಲಂಬಿ ಜೀವನ(parasite life)... ಬರೋಬರಿ ೧ ವರ್ಷ #%#* ಊರಿ ಕೂತ್ಕೊಂಡ್ ಓದಬೇಕು ,ಅಪ್ಪ ಸ್ವಲ್ಪ ಸ್ಥಿತಿವಂತನಾಗಿದ್ರೆ ಮತ್ತೆ ದುಡ್ಡ ಕೊಟ್ಟು (ದುಡ್ಡು ವಾಪಸ್ ಬರತ್ತೆ ಅನ್ನೋ SURITY ಇಲ್ಲದೆ ) ಸ್ಪೀಡ್, ಭಾಟಿಯಾ ಇಲ್ಲ I A M S ಗೋ ಕಳಿಸ್ತಾನೆ.. ೧೯ SUBJECT ಗಳನ್ನ ಇದ್ದ ಸಮಯದಲ್ಲೇ ಎಲ್ಲ ಗಾಂಚಾಲಿ ಬಿಟ್ಟು, ಕಣ್ಣಿಗ್ ಎಣ್ಣೆ ಹಾಕ್ಕೊಂಡು ಓದಿ ೫ ೬ ಪರೀಕ್ಷೆ ಬರೀತಿವಿ , ಅದಾದ್ ಮೇಲು ರಾಂಕ್ ಬರತ್ತೆ , ಒಂದ್ ಪಿ ಜಿ ಸೀಟ್ ಸಿಗತ್ತೆ ಅನ್ನೋ ವಿಶ್ವಾಸ ಯಾವ್ ಸರಸ್ವತಿ ಪುತ್ರಂಗು ಇರಲ್ಲ! ಗಾಣದ ಎತ್ತಿನಂಗೆ ಓದ್ತಾ ಇರೋದು,ಓದ್ತಾ ಇರೋದು, ಮರಿಯೋದು , ತಲೆ ತಲೆ ಬಡ್ಕೊಳೋದು ಮತ್ತೆ ಓದೋದು! .. ದೇವ್ರೇ, ಗಾರೆ ಹೊರೋ ಕೆಲಸ ಸುಲಭ ಅನ್ಸತ್ತೆ ಈ ಕೂತ್ಕೊಂಡ್ ಓದೋದಕ್ಕಿಂತ...
ಆಯ್ತು, ಹಂಗು ಹಿಂಗು ಫೈಟ್ ಮಾಡಿ ಸಾವಿರಾರು ಮರಿ ಡಾಕ್ಟರಗಳ ಜೊತೆ ಮೂರುವರೆ ಗಂಟೆ ಏಗಿ ಒಂದ್ rank ಬಂತು ಅಂತ ಇಟ್ಕೋಳಿ,ಮತ್ತೆ ಯಾವ್ ಬ್ರಾಂಚು, ಯಾವ್ ಕಾಲೇಜ್ , ಯಾವ್ ಸ್ಟೇಟ್ , ಬಾಂಡ್ ಇದೆಯಾ, STIPEND ಎಷ್ಟು , ನಾರ್ತ್ ಇಂಡಿಯನ್ಸ್ ಸೌತ್ ಇಂದಿಂಸ್ ಅಂತ ಭೇದಭಾವ ಮಾಡ್ತಾರ? ಎಲ್ಲ ವಿಚಾರಿಸಬೇಕು ...
ನಾನು ಇಷ್ಟೆಲ್ಲಾ ಕಷ್ಟ್ ಪಟ್ಟು ಸೀಟ್ ತೊಗೊಂಡೆ 1 ST ರೌಂಡ್ ಅಲ್ಲಿ ನಾರ್ತ್ ಅಲ್ಲಿ ಒಂದ್ ಕಾಲೇಜ್ ನಲ್ಲಿ ತೊಗೊಂಡಿದ್ದೆ. ಅಲ್ಲಿ STIPEND ಚೆನ್ನಾಗಿತ್ತು. ಆದ್ರೆ , ನಂ ಬ್ರಾಂಚ್ ಅಲ್ಲಿ ಚೆನ್ನಾಗಿರಲಿಲ್ಲ . ಅದಕ್ಕೆ 2ND ರೌಂಡ್ ನಲ್ಲಿ ನಮ್ಮ ಬೆಂಗಳೂರಲ್ಲೇ ಸೀಟ್ ತೊಗೊಂಡೆ .. ತುಂಬಾ ಖುಷಿ ಆಯ್ತು , ನಾರ್ತ್ ಬಿಸಿಲ್ಲಲ್ಲಿ ಬಳಲಿ ಬಂದವನಿಗೆ ನಮ್ಮ ಬೆಂಗಳೂರು ಸ್ವರ್ಗಾನೆ! ಮನೆಗೂ ಚೂರ್ ಹತ್ರ , ಎಲ್ಲ ನಮ್ಮ ಜನ , ಊಟ ತಿಂಡಿ ಗು ಏನ್ ಪ್ರಾಬ್ಲಂ ಆಗಲ್ಲ ಅಂತ ಖುಷಿಲಿ ಕುನದಾಡ್ತಾ ಇದ್ದೆ.. ಆದ್ರೆ ಈ ಕುರುಡು ಕಾಂಚಾಣ ಎಂಥ ಪಾರ್ಟಿ ನಾದ್ರೂ ಎಕ್ಕುಟ್ಟ ಹೋಗೋ ಹಾಂಗ್ ಮಾಡತ್ತೆ... ನಾ ಸೀಟ್ ತೊಗೊಂಡಿರೋ ಕಾಲೇಜ್ ಅಲ್ಲಿ STIPEND ಎಷ್ಟು ಗೊತ್ತಾ? ೧೦ ಸಾವಿರ ಮಾತ್ರ.. ನೀವೇ ಹೇಳಿ ಸಾರ್, ಬೆಂಗಳೂರಲ್ಲಿ ೧೦ ಸಾವಿರ ವರಹಗಳು ಸಾಕಾಗುತ್ತ ಕುಟುಂಬ ನಡ್ಸೋಕೆ? ನಾನು PG ENTRANCE ಅಲ್ಲಿ rank ಬಂದ್ ಕೂಡಲೇ ಅನ್ಕೊಂಡಿದ್ದೆ ಕಷ್ಟದ ದಿನಗಳು ಇನ್ನು ಮುಗಿದವು , ಇನ್ನೆನಿದ್ರು ಜಾಮ್ ಜಾಮ್ ಅಂತ ಮಜಾ ಮಾಡೋದ್ ಅಷ್ಟೇ , MBBS ಮಾಡ್ಬೇಕಾದ್ರಂತು ಗರ್ಲ್ ಫ್ರೆಂಡ್ ಇರ್ಲಿಲ್ಲ , ಇನ್ನ ಮೇಲಾದ್ರು ಬೇಗ ENGAGEMENT ಮಾಡ್ಕೊಂಡು ಮಜವಾಗಿರೋಣ ಅಂತ ಕನಸು ಕಂಡಿದ್ದೆ , ಆದ್ರೆ ಈ ೧೦ K ಸಂಬಳ ಇಟ್ಕೊಂಡು( ಹೇಳ್ ಕೊಳೋಕೆ ಡಾಕ್ಟರು) ENGAGEMENT ಮಾಡ್ಕೊಂಡ್ರೆ ನನ್ನ ಹುಡಗಿ ಗೆ ಒಂದ ಸಣ್ಣ ಗಿಫ್ಟ್ ಕೊಡ್ಬೇಕಂದ್ರು, ಅಪ್ಪನ ಹತ್ರ ನೆ ಕೇಳಬೇಕು ... 'ಅಪ್ಪ ಅಪ್ಪ ನನ್ನ ಹುಡುಗಿ ಗೆ ಒಂದ್ ಗಿಫ್ಟ್ ಕೊಡ್ಬೇಕು , ಸಲ್ಪ ದುಡ್ಡ ಕೊಡ್ತಿಯ ?????' It sounds so helpless. isnt it? ಅದೇ ನನ್ನಪ್ಪ ಮಲ್ಲ್ಯ ನೋ ಇಲ್ಲ ಅಂಬಾನಿ ಯೋ ಆಗಿದ್ರೆ ನಾನ್ ಕಷ್ಟ ಪಡಬೇಕಾಗೆ ಇರ್ಲಿಲ್ಲ , ಯಾವುದಕ್ಕೂ ಯೋಚ್ನೆ ಮಾಡ್ತಾನೆ ಇರ್ಲಿಲ್ಲ , probably ನನ್ನ ಐಡೆಂಟಿಟಿ ನೆ ಇರ್ತಿರ್ಲಿಲ್ಲ . ನನ್ನಪ್ಪ ನನ್ನಮ್ಮ ಎಷ್ಟೇ ಓದಿರಲಿ, ಎಷ್ಟೇ ಗಳಿಸ್ತ ಇರ್ಲಿ, ಜಗತ್ತಿನಲ್ಲಿನ ಎಲ್ಲ ಸವಲತ್ತು ಗಳನ್ನ ನನಗೆ ಕೊಡೋಕ್ ಆಗದಿದ್ರೂ , ಅವರು ತಮ್ಮ ಬೇಕು ಬೇಡಗಳನ್ನು ಮರೆತು , ತಮ್ಮ ಆಸೆ ಆಕಾಂಕ್ಷೆ ಗಳನ್ನ ಬದಿಗಿಟ್ಟು ನನಗೆ ಒಂದು ಒಳ್ಳೆ ಭವಿಷ್ಯ ನೀಡಿದ್ದಾರೆ..
ಅಪ್ಪ ಅಮ್ಮ - ನಾನು ಮುಂದೆ ಆರ್ಥಿಕವಾಗಿ ನಿಮಗಿಂತ ಒಳ್ಳೆ ಸ್ಥಿತಿಯಲ್ಲಿರ್ತೀನಿ, ಆದ್ರೆ ನಿಮ್ಮ ತರ ಆದರ್ಶ parent ಆಗ್ತಿನೋ ಇಲ್ವೋ ಗೊತ್ತಿಲ್ಲ ..
hats off ಟು u ಅಪ್ಪ ಅಮ್ಮ ......

No comments:

Post a Comment