
ಇಂದಿನ ದಿನ ಯಾಕೋ ಸರಿಯಾಗಿಲ್ಲ ಅಂತ ಅನ್ನಿಸ್ತಾ ಇತ್ತು ಬೆಳಿಗ್ಗೆ ಎದ್ದಾಗಿನಿಂದ.. ಆದ್ರೆ ದಿನ ಏನ್ ಮಾಡತ್ತೆ ಪಾಪ. ಎಲ್ಲ ನಮ್ಮ ಸಾಮರ್ಥ್ಯ , ಪ್ರಯತ್ನ , ಅದ್ರಷ್ಟಕ್ಕೆ ಅನುಸಾರವಾಗಿ ನಾವು ಫಲಾಫಲಗಳನ್ನು ಪಡಿತೇವೆ.. ಆದ್ರು ಏನೋ ಗೊತ್ತಿಲ್ಲ ಕಣ್ರೀ ಬೆಳಿಗ್ಗೆ ಎದ್ದಾಗ ಹುಮ್ಮಸ್ಸೇ ಇರ್ಲಿಲ್ಲ.. ಏನಾದ್ರೂ ಆಗಬಹುದು ಅಂತ anticipate ಮಾಡ್ತಾ ಇದ್ದೆ.
ಸಂಜೆ ತನಕ ಏನ್ ಸುದ್ದಿ ಇರ್ಲಿಲ್ಲ. ಆಮೇಲೆ ಶುರು ಆಯ್ತು ನೋಡಿ , ಸುದ್ದಿಗಳ ಸರಪಣಿ.. ... ಐ ಎ ಎಸ results ಬಗ್ಗೆ ಕೇಳ್ದೆ , ಅದರಲ್ಲಿ ಇಬ್ಬರು ನನ್ನ ಪರಿಚಯದವರು rank ತೊಗೊಂಡಿದ್ರು... ಐ ಎ ಎಸ ನನ್ನ ಕನಸಾಗಿತ್ತು , ಆದ್ರೆ ಯಾಕೋ ಗೊತ್ತಿಲ್ಲ ಆ ಕಡೆ ಹೋಗಕಾಗ್ಲಿಲ್ಲ... ಸೊ ನಾನು ಪ್ರಯತ್ನ ಮಾಡದೆ ಸೋಲು ಒಪ್ಪಿಕೊಂಡೆ ಅಂತ ಅನ್ನಿಸ್ತ ಇತ್ತು..... ಅದಾದ ಮೇಲೆ ಗೊತ್ತಾಯ್ತು ನಮ್ಮ ಕೌನ್ಸೆಲ್ಲಿಂಗ್ ಖಟ್ಲೆ supreme court ನಲ್ಲಿ ಉಲ್ಟಾ ಹೊಡಿತ ಐತೆ ಅಂತ, ಮತ್ತೆ ಅದೇ stipend ಸಮಸ್ಯೆ, ಅದೇ ಗಬ್ಬು ಲೈಫ್ ನೆನಪಿಗೆ ಬರ್ತಾ ಇತ್ತು ...
ಅದಾದ್ ಮೇಲೆ ನನ್ನ ಫ್ರೆಂಡ್ (ನಾ ಯಾರಿಗೆ ಲೈನ್ ಹೊಡಿತಿದ್ದನೋ!) ಗೆ ಇದನ್ನೆಲ್ಲಾ ಹೇಳ್ದೆ, ಅವಳು as usual ತನ್ನ ಸ್ವೀಟ್ ವೋಯಿಸ್ ನಲ್ಲಿ ನನಗೆ ಸಮಾಧಾನ ಮಾಡಿದ್ಲು. ಅದೇನು ಮ್ಯಾಜಿಕ್ ಇರತ್ತೋ ನಾವ್ ಇಷ್ಟ ಪಟ್ಟವರಲ್ಲಿ, ಮನಸಿಗೆ ತುಂಬಾ ಖುಷಿ ಆಗತ್ತೆ... ನನಗೆ ಆ ತರ ಖುಷಿ ಆದಾಗ್ಲೆಲ್ಲ ನನಗೆ ಮತ್ತೊಮ್ಮೆ ಅವಳಿಗೆ ನಾ ನಿನ್ನ ತುಂಬಾ ಇಷ್ಟ ಪಡ್ತೀನಿ ಅಂತ ಹೇಳ್ಬೇಕು ಅನ್ಸುತ್ತೆ ... ಇವತ್ತು ಧೈರ್ಯ ಮಾಡಿ ಹೇಳೇ ಬಿಟ್ಟೆ.... ಆದ್ರೆ as expected ಇಟ್ ಡಿಡ್ ನಾಟ್ ವರ್ಕ್ ಔಟ್!! ಆದ್ರೆ ಅವಳು ಹೇಳಿದ ಒಂದೊಂದು ಮಾತು ಗಂಟು ಕಟ್ಟಿ ಇಟ್ಟ ಕೊಳ್ಳೋ ತರ ಇದ್ವು... ಅವಳು ಒರಟಾಗಿಯೋ, ಸೀನ್ create ಮಾಡಿಯೋ ಹೇಳಲಿಲ್ಲ. ಡಿಸೆಂಟ್ ಆಗಿ, ಈ ಜಗತ್ತಿನಲ್ಲಿ ಯಾರು ಯಾರನ್ನಾದರು ಇಷ್ಟ ಪಡಬಹುದು, ಆದ್ರೆ ಪ್ರತಿ ಸಲ response ಸಿಗತ್ತೆ ಅಂತ ಅನ್ಕೋ ಬಾರದು.. Go to the one who loves u and not the one whom u love! ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ.. ನಾನು ಹೀಗೆಲ್ಲ ಹೇಳ್ದೆ ಅಂತ ಬೇಜಾರ್ ಮಾಡ್ಕೊಂಡು ಕೂರಬೇಡ, ಯಾಕೆ ಅಂದ್ರೆ life has to move on, becoz it doesnt wait for u till u recover from this!!
ಹೌದು ಅವಳು ಹೇಳಿದ್ದು ೧೦೦% ಕರೆಕ್ಟ್. ಜೀವನ ಯಾವುದೇ ಕಾರಣಕ್ಕೂ ನಿಲ್ಲಲ್ಲ, so whatever may happen , just move on....................
No comments:
Post a Comment