
ಯಾಕೋ ದಿನನೇ ಸರಿಯಾಗಿಲ್ಲ ಅನ್ನಿಸ್ತಾ ಇತ್ತು... ಆದ್ರೆ ದಿನ ಏನ್ ಮಾಡತ್ತೆ ಬಿಡಿ. ನಾವು ನಮ್ಮ ನಮ್ಮ ಸಾಮರ್ಥ್ಯ , ಪ್ರಯತ್ನ , ಅದ್ರಷ್ಟದ ಪ್ರಕಾರ ಫಲಾಫಲಗಳನ್ನ ಪಡೀತಿವಿ.ಆದ್ರೆ ಯಾಕೋ ಗೊತ್ತಿಲ್ಲ ಬೆಳಿಗ್ಗೆ ಎದ್ದಾಗಿನಿಂದ ಮನಸ್ಸಿಗೆ ಹುಮ್ಮಸ್ಸೇ ಇಲ್ಲ. ಏನೋ ಕೆಟ್ಟದಾಗಬಹುದು, ಅಂತ intuition ನಿಂದ ಗೊತ್ತಾಗ್ತಾ ಇತ್ತು. ಮಧ್ಯಾಹ್ನದ ತನಕ ಏನು ಸುದ್ದಿ ಬರಲಿಲ್ಲ, ನಾನು ಇದೇನಾಶ್ಚರ್ಯ ಇನ್ನೂ ಏನು ಸುದ್ದಿನೇ ಇಲ್ಲ ಅನ್ಕೊತಿದ್ದೆ, ಅಷ್ಟರಲ್ಲಿಯೇ ಒಂದಾದ ಮೇಲೊಂದು ಶಾಕಿಂಗ್ ಸುದ್ದಿಗಳು ಬರ ತೊಡಗಿದವು.
ಲ್ಯಾಪ್ ಟಾಪ್ ಓಪನ್ ಮಾಡ್ದೆ , ಸಿವಿಲ್ ಸರ್ವಿಸ್ ರಿಸಲ್ಟ್ ನೋಡ್ದೆ.. ಅದರಲ್ಲಿ ನನ್ನ ಪರಿಚಯದವರು ಇಬ್ಬರು rank ಹೊಡೆದಿದ್ರು. ಯಾಕೋ ಬೇಜಾರ್ ಆಯ್ತು. ನಾನು ಚಿಕ್ಕವನಿದ್ದಾಗಿಂದ ಐ ಎ ಎಸ ಮಾಡಬೇಕು ಅಂತ ಅನ್ಕೊಂಡಿದ್ದೆ, ಆದ್ರೆ ಯಾಕೋ ಗೊತ್ತಿಲ್ಲ ಆ ಕಡೆ ತಲೆ ಹಾಕೋಕೆ ಆಗಿಲ್ಲ, ನನ್ನ ಕನಸನ್ನ ಪ್ರಯತ್ನ ಪಡದೇನೆ ಬಿಟ್ಟು ಬಿಡ್ತಾ ಇದಿನೇನೋ ಅನ್ನಸ್ತು. ಅದಾದ ಮೇಲೆ , 3rd ರೌಂಡ್ ಕೌನ್ಸೆಲ್ಲಿಂಗ್ ಬಗ್ಗೆ supreme court ನಲ್ಲಿ ನಾವು ಹಾಕಿದ ಕೇಸ್ ಉಲ್ಟಾ ಹೊಡಿತಾ ಇದೆ ಅಂತ ಸುದ್ದಿ ಬಂತು... ಮತ್ತೆ ಕಮ್ಮಿ stipend , ಅದೇ ಗಬ್ಬು ಜೀವನ, ಕೈ ಚಾಚೋದು ನೆನಪಿಗೆ ಬಂದು dippression ಗೆ ಹೋಗ್ತಾ ಇದ್ದೆ.
ಅದೇ ಸಮಯದಲ್ಲಿ ನನ್ನ ಫ್ರೆಂಡ್ (ನಾ ಯಾರನ್ನ ಇಷ್ಟ ಪಡ್ತಿನೋ;-)) ಜೊತೆ ಮಾತಾಡಬೇಕು ಅಂತ ಅನ್ನಿಸ್ತು.. ಅವಳ ಜೊತೆ ಮಾತಾಡ್ತಾ , ಏನೇನಾಯ್ತು ಎಲ್ಲ ಹೇಳ್ದೆ... as usual ಅವಳ ಸ್ವೀಟ್ ವಾಯ್ಸ್ , ಅವಳ ನಗು , ನನ್ನನ್ನ ಸಮಾಧಾನ ಪಡಿಸೋ ರೀತಿ ಎಷ್ಟು ಖುಷಿ ಕೊಟ್ತು ಅಂದ್ರೆ, ಒಂದ್ ಕ್ಷಣ ನಾನು ಎಲ್ಲ ಸಮಸ್ಯೆಗಳನ್ನ ಮರೆತು ತೇಲಾಡ ಬಿಟ್ಟೆ.. ಅವಳು ನನ್ನ ಜೊತೆ ಮಾತಾಡಿದಾಗಲೆಲ್ಲ , ನಿನ್ನನ್ನ ನಾನು ಇಷ್ಟ ಪಡ್ತೀನಿ ಅಂತ ಹೇಳಬೇಕು ಅನ್ಸತ್ತೆ... ಇವತ್ತು ಹೇಗೋ ಧೈರ್ಯ ಮಾಡಿ , ಹೇಳ್ಬಿಟ್ಟೆ... ಬಟ್ as expected , ಇಟ್ ಡಿಡ್ ನಾಟ್ ವರ್ಕ್ ಔಟ್... ತುಂಬಾ ಬೇಜಾರ್ ಆಯ್ತು..ಆದ್ರೆ ಆ ಕ್ಷಣ ಅವಳು ಹೇಳಿದ ಮಾತುಗಳು ನನಗೆ ಒಂದ್ ಪಾಠ ಕಲಿಸಿದವು.. ' In this world u can like anyone, but u should not expect the response everytime.... . ನಿನಗೆ ನನಗಿಂತ ಒಳ್ಳೆ ಹುಡುಗಿ ಸಿಗ್ತಾಳೆ... Go to the one who loves u, not to whom u love... ನಾನು ಈ ತರ ಹೇಳಿದೀನಿ ಅಂತ ತಲೆ ಕೆಡ್ಸ್ಕೊಂಡು ದೇವದಾಸ್ ಆಗಬೇಡ.. Just move on.... whatever may happen , life should move on.. becoz it doesnt wait for u , till u recover...!
೧೦೦% ನಿಜ, ಏನಾಗಲಿ ಮುಂದೆ ಸಾಗು ನೀ ,ಬಯಸಿದ್ದೆಲ್ಲ ಸಿಗದು ಬಾಳಲಿ - ಅನ್ನೋ ಹಾಗೆ Just move on...............
This was posted ydy but it was deleted by blogger for unknown reasons... so posted it again..
ReplyDelete