Tuesday, May 17, 2011

ಗೋಪಾಲ್ ......


ನನ್ನ internship ನ ಅರ್ಧ ಇನ್ನಿಂಗ್ಸ್ ಮುಗಿತಾ ಇತ್ತು, ಅಲ್ಲಿ ತನಕ ನಾನು ಜೀವನ, ಸಂತೋಷ, ಸಾವು,ದುಃಖ, ನೋವು ಒಂದು different angle ನಿಂದ ನೋಡಿದ್ದೆ. ಈ ಜಗತ್ತಿನಲ್ಲಿ ತುಂಬಾ variety ಜನ ಇದಾರೆ, ಅವರ ಜೊತೆ ಹೇಗೆ ಏಗೋದು ಅಂತ ಕಲಿತಾ ಇದ್ದೆ.. ಸಾವು , ನೋವುಗಳನ್ನ ಕಂಡು ಒಂಥರಾ ಅವುಗಳಿಗೆ ಗೊತ್ತಿಲ್ದೇನೆ immune ಆಗ್ತಾ ಇದ್ದೆ..
ಆಗ ನಂದು paediatrics ಪೋಸ್ಟಿಂಗ್ ಶುರು ಅಗೊದ್ರಲ್ಲಿತ್ತು.. ನಮ್ಮ ಹುಡುಗರೆಲ್ಲ ಆ ಪೋಸ್ಟಿಂಗ್ ತುಂಬಾ ಕೀರಿಕ್, ಬಹಳ ಡ್ಯೂಟಿ ಮಾಡ್ಬೇಕಗತ್ತೆ, ಅಷ್ಟೇ ರಿಸ್ಕ್ ಇರತ್ತೆ, ಒಂದು ತಿಂಗಳು ಜಗತ್ತೇ ನೋಡಕ್ಕಾಗಲ್ಲ ಅಂತ ಹೆದರಿಸಿದ್ದರು..ಆದ್ರೆ ಮೊದಲಿಂದಲೂ ನನಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ.. so ಏನು ಪ್ರಾಬ್ಲಮ್ ಆಗಲ್ಲ ಅಂತ ಅನ್ಕೊಂಡು ಫಸ್ಟ ಡೆ ಹೋಗಿ ಜಾಯಿನ್ ಆದೆ.. ಆಗ dengue epidemic ಇತ್ತು, ಹೀಗಾಗಿ ವಾರ್ಡ್ ತುಂಬಾ ಮಕ್ಕಳು.. ಮೊದಲನೇ ಸಲ ನೋಡ್ದಾಗ ತುಂಬಾ ಕಿರಿ ಕಿರಿ ಆಯ್ತು .. ಆದ್ರೆ ನಿಧಾನವಾಗಿ ಅಡ್ಜಸ್ಟ್ ಆದೆ.
ನಮ್ಮಲ್ಲಿ interns ಗಳು ಎಲ್ಲ patients ಗಳ ಬ್ಲಡ್ ಡ್ರಾ ಮಾಡಿ investigation ಗೆ ಕಳಸಬೇಕಾಗಿರತ್ತೆ. ಆ ಚಿಕ್ಕಮಕ್ಕಳು ಮೊದಲೇ irritate ಆಗಿ ಅಳತಿರ್ತವೆ ,ಅಂಥದ್ರಲ್ಲಿ ಅವುಗಳನ್ನು ಹಿಡಿದು ಹಿಂಸೆ ಕೊಟ್ಟು ರಕ್ತ ಹೀರೋದು ಅಂದ್ರೆ ಹರ ಸಾಹಸ ಪಡಬೇಕು... ಅಲ್ಲಿ ಒಂದು ಮೂಲೆಯಲ್ಲಿ ID ವಾರ್ಡ್ ಇತ್ತು.. ಅಲ್ಲಿ hiv positive ಮಕ್ಕಳನ್ನ ಅಡ್ಮಿಟ್ ಮಾಡ್ತಿದ್ರು.. ನನ್ನ ಸಹಪಾಠಿಗಳು ವಾರ್ಡ್ ಗಳನ್ನ ಹಂಚಿಕೊಂಡು ನನಗೆ ID ವಾರ್ಡ್ ಇನ್ ಚಾರ್ಜ್ ಮಾಡಿದ್ರು.. ನನಗೆ ಏನೋ ಒಂಥರಾ ಕಸಿವಿಸಿ ಆಯ್ತು... ಆದರು ಕಾಯಕವೇ ಕೈಲಾಸ ಅಂತ ಅಲ್ಲಿ ಹೋದೆ.. ಅಲ್ಲಿ ೫ ೬ ಪೆಷoಟ್ಸ ಇದ್ರು.. ಎಲ್ಲ ೩ ರಿಂದ ೧೦ ವಯಸ್ಸಿನೊಳಗಿನ ಮಕ್ಕಳು.. ಪುಟಾಣಿ ಮಕ್ಕಳು. ಉಳಿದ ಮಕ್ಕಳಂತೆ ಆಟ, ಓಟ ಸ್ಕೂಲ್ ಬಿಟ್ಟು ಗೆಲ್ಲಲು ಸಾಧ್ಯವೇ ಇಲ್ಲದಂತಹ ಯುದ್ಧ ಮಾಡ್ತಿದ್ವು... ಆದ್ರೆ ಒಂದ ಮಾತನ್ನ ಒಪ್ಕೋ ಬೇಕು , ಆ ಮಕ್ಕಳು ಮಾತ್ರ ತುಂಬಾ bright ...
ಅದರಲ್ಲಿ ಒಬ್ಬ ಹುಡುಗ ಇದ್ದ , ಅವನ ಹೆಸರು ಗೋಪಾಲ್... ಸುಮಾರು ೧೧ ವರ್ಷದವನಿರಬಹುದು.. ಆತನಿಗೂ dengue ಸಸ್ಪೆಕ್ಟ್ ಮಾಡಿದ್ರು.. ಅದಕ್ಕೆ ದಿನಾಲೂ platelet ಕೌಂಟ್ ಗೆ ಬ್ಲಡ್ ಡ್ರಾ ಮಾಡಬೇಕಿತ್ತು... ಅದಕ್ಕಾಗಿ ನಾನು ಕೈಯಲ್ಲಿ syringe ಹಿಡಿದು ಅವನ ಮುಂದೆ ನಿಂತೆ. ಅಸ್ಥಿ ಪಂಜರಕ್ಕೆ ಬಟ್ಟೆ ತೊಡಿಸಿದ ಹಾಗೆ ಇತ್ತು.. ಆದ್ರೆ ಅವನ್ ಕಣ್ಣುಗಳು ಮಾತ್ರ ಪ್ರಖರವಾಗಿ ಹೊಳಿತಿದ್ವು.. syringe ನೋಡಿದ ಕೂಡಲೆ ಆತ ಆಳಕ್ ಶುರು ಮಾಡ್ದ..ನಾನು ಅವನ್ನನ ಸಮಾಧಾನ ಮಾಡಿ, ನಿಧಾನವಾಗಿ ಆತನ ಲಕ್ಷ್ಯ ಬೇರೆ ಕಡೆ ಹೊರಳಿಸಿ , ಕಮ್ಮಿ ನೋವು ಆಗೋ ತಾರಾ ಬ್ಲಡ್ ಡ್ರಾ ಮಾಡ್ದೆ... ಆತನಿಗೆ ತುಂಬಾ ಖುಷಿ ಆಯ್ತು.. ಸರ್ ಭಾಳ್ ಚ್ಹೊಲೋ ಅದಿರ್ ನೀವು, ನಂಗ್ ಸ್ವಲ್ಪು ನೋವ ಅಗ್ಲಿಲ್ರಿ, ನಾಳಿಂದ ನೀವ ನಂಗ್ ಇನ್ಜೆಕ್ಷನ್ ಮಾಡ್ರಿ.. ಅಂದ... ನಾನು ನನ್ನ ಸ್ಕಿಲ್ ಗಳ ಬಗ್ಗೆ ಖುಷಿ ಪಟ್ಟು ಅಲ್ಲಿಂದ ಹೊರ ನಡೆದೆ.. ಹಾಗೆ ದಿನಗಳು ಉರುಳಿದವು... ಅದ ಯಾವಾಗ ನಾನು ಗೋಪಾಲ್ ನನ್ನ ಹಚ್ಚಿಕೊಂಡ ಬಿಟ್ನೋ ಗೊತ್ತಿಲ್ಲ, ದಿನ ಹೋಗಿ ಆತನನ್ನ ಮಾತಾಡಿಸಿ ಬರ್ತಿದ್ದೆ, ಆಗಾಗ ಚಾಕಲೇಟ್ ಕೊಡ್ತಿದ್ದೆ... ಪೆಷoಟ್ಸ ಗಳನ್ನ emotional ಆಗಿ ನೋಡಬಾರದು ಅನ್ನೋದು ನಮ್ಮ ಪ್ರೊಫೆಶನ್ ನ ಬೇಸಿಕ್ ರೂಲ್.. ಆದ್ರೆ , ಗೊತ್ತಿಲ್ಲ ಆ ಹುಡುಗನ ವರ್ಚಸ್ಸೇ ಹಾಗಿತ್ತು or ಪ್ರಾಬಬ್ಲಿ ಹೇ ವಾಸ್ ಅ ಸ್ಪೆಷಲ್ ಕಿಡ್.. ಆಸ್ಪತ್ರೆ ಲಿ ಅವನನ್ನ ನೋಡಿಕೊಳ್ಳಲು ಅವನ ತಂದೆ ಅವನ ಜೊತೆ ಇದ್ದ.. ಕಟ್ಟುಮಸ್ತಾದ ಆಳು.. ತನ್ನ ಮಗನಿಗೆ ಏನ್ ಬೇಕಾದರು ತಂದ ಕೊಡ್ತೀನಿ, ಅವನೇ ನನ್ನ ಜೀವ ಅಂತ ಹೇಳ್ತಿದ್ದ..
ಒಂದ್ ದಿನ ಅವರಪ್ಪ ಬಂದು ಸರ್ ಗೋಪಾಲ್ ಭಾಳ್ ಹಠ ಮಾಡಾಕ್ಹತ್ತ್ಯಾನ್ರಿ, ಊಟ ಮಾಡವಾಲ್ರಿ, ಸ್ವಲ್ಪ ಬಂದು ನೋಡ್ರಿ ಅಂತ ಹೇಳ್ದ... ಅಲ್ಲಿ ಹೋಗಿ ಏನಾಯ್ತಪ್ಪ ಅಂತ ಕೇಳಿದ್ರೆ ನನಗೆ ಅಮ್ಮ ಬೇಕು ಅಂತ ಅಳ್ತಿದ್ದ.... ಅವರಪ್ಪನಿಗೆ ಅವರಮ್ಮನ್ನ ಕರೆಸಿ ಅಂತ ಹೇಳಿದೆ... ನಾನು ಒಬ್ಸೆರ್ವ್ ಮಾಡ್ತಿದ್ದೆ , ಒಂದ್ ವಾರ ಆದ್ರೂನು ಅವನಮ್ಮ ಬರಲೇ ಇಲ್ಲ.. ಅವರಪ್ಪನ್ನ ಕೇಳಿದ್ರೆ , ಅವಳಿಗೆ ಮನೇಲಿ ತುಂಬಾ ಕೆಲಸ , ಇನ್ನು ಇಬ್ಬರು ಮಕ್ಕಳನ್ನ ನೋಡ್ಕೋಬೇಕು, ಅದಕ್ಕೆ ಅವಳು ಬರಲ್ಲ ಅಂತ.. ಆದ್ರೆ ಯಾವ್ ತಾಯಿ ತಾನೇ , ತನ್ನ ಮಗು ಆಸ್ಪತ್ರೆಲಿ ತನ್ನ ಕೊನೆ ದಿನ ಎನ್ಸತ ಇರ್ಬೇಕಾದ್ರೆ ಮನೆ ಕೆಲಸ ಮಾಡ್ಕೊಂದಿರ್ತಾಳೆ ಹೇಳಿ ಸ್ವಾಮಿ? ಏನೋ ವಿಷಯ ಇದೆ ಅಂತ ಗೊತ್ತಾಯ್ತು , ಅವರ ತಂದೆನ ಕರೆದು ಕೇಳಿದ್ರೆ ಏನು ಇಲ್ಲ ಅಂತ ಎಸ್ಕೇಪ್ ಆದ..
ಹ್ಯಾಗೋ ಒಂದ್ ತಿಂಗಳು PAEDIATRICS ಪೋಸ್ಟಿಂಗ್ ಮುಗಿತ ಬಂತು.. ತಮ್ಮ ಮಕ್ಕಳು ಹುಷಾರಾಗಿ ವಾಪಸ್ ಮನೆಗೆ ಹೋಗಬೇಕಾದ್ರೆ ಸಿಹಿ ಕೊಟ್ಟು ಹೋಗೋ ತಂದೆ ತಾಯಿನೂ ಇದ್ರೂ, ತಮ್ಮ ಕಂದಮ್ಮಗಳನ್ನ ಕಳೆದುಕೊಂಡ ದುಖದಲ್ಲಿ ನಮ್ಮನ್ನ ಶಪಿಸಿ ಹೋಗೊವ್ರು ಇದ್ರು. ಕೆಲವೊಂದು ಜೀವಗಳನ್ನ ಉಳಿಸಿದ್ದಕ್ಕೆ ಖುಷಿ ಆದ್ರೆ, ಇನ್ನು ಕೆಲ ಜೀವಗಳು ಹೋಗಬೇಕಾದ್ರೆ ನಮ್ಮ ಕೈಯಲ್ಲಿ ಏನು ಮಾಡಕಾಗ್ಲಿಲ್ಲ ಅನ್ನೋ ಕೊರಗು ಕಾಡ್ತಿತ್ತು... ಆದ್ರೆ ಜೀವ ಉಳಿಸಿದ ಭಾವನೆ, ಆ ಕೊರಗನ್ನ ಮರೆ ಮಾಚಿತ್ತು..
ಕೊನೆ ದಿನ ಗೋಪಾಲ್ನನ್ನ ಭೆಟ್ಟಿ ಆಗಿ, ಒಂದೆರಡು ಚಾಕಲೇಟ್ ಕೊಟ್ಟು, ಇನ್ನ ಮೇಲೆ ನಾ ಇಕಡೆ ಬರಕಾಗಲ್ಲ, ಸುಮ್ ಸುಮ್ನೆ ಹಠ ಮಾಡಬೇಡ, ಗೆಟ್ ವೆಲ್ ಸೂನ್ ಅಂತ ಹೇಳಿ ಅಲ್ಲಿಂದ ಹೊರಟು ಬಿಟ್ಟೆ... ಆತ ನನ್ನ ಮೊಬೈಲ್ ನಂಬರ್ ಇಸ್ಕೊಂಡ... ಆ ಹುಡುಗನ ಬಗ್ಗೆ ಪಾಪ ಅನ್ನಿಸ್ತ ಇತ್ತು.. ಯಾವ ತಪ್ಪು ಮಾಡದೆ ಇಂಥ ಘೋರ ಶಿಕ್ಷೆ ಅನುಭವಿಸ್ತ ಇದಾನೆ... ಪ್ರಾಬಬ್ಲಿ ಥಾಟ್ಸ್ ದಿ ವೇಯ್ ಇಟ್ ಇಸ್...
ಅದಾದ್ ಮೇಲೆ ನನ್ನ ಜೀವನ ಹಾಗೆ ಸಾಗ್ತಾ ಇತ್ತು.. ಗೋಪಾಲ್ ನನಗೆ ಒಂದೆರಡು ಸಲ ಫೋನ್ ಸಹ ಮಾಡಿದ್ದ.. ಕ್ರಮೇಣ ಎಲ್ಲ ನೆನಪಿನ ಪುಟಗಳನ್ನ ಸೇರ್ತಾ ಇತ್ತು... ಒಂದು ದಿನ ಜೋಗ ಫಾಲ್ಸ್ ಗೆ ಹೋಗಿ ವಾಪಸ್ ಬರಬೇಕಾದರೆ ಗೋಪಾಲ್ ನ ಊರು ದಾರಿ ಮಧ್ಯದಲ್ಲಿ ನೆನಪಿಗೆ ಬಂತು... ಹಾಗೆ ಗಾಡಿ ಇಳ್ದು , ಯಾರನ್ನೋ ವಿಚಾರಿಸಿದೆ ಅವರು ಅವನ ಮನೆ ತೋರಿಸಿದರು... ಅಲ್ಲಿ ಹೋಗಿ ನೋಡಿದ್ರೆ ಅವನ ಮನೆ ಬೀಗ ಹಾಕಿತ್ತು... ಅಲ್ಲೇ ಪಕ್ಕದಲ್ಲೇ ಒಬ್ಳು ಮುದಕಿ ಕೂತಿದ್ಲು.. ಅವಳನ್ನ ಗೋಪಾಲ್ನ ಬಗ್ಗೆ ಕೇಳಿದ್ರೆ ' ಯಪ್ಪಾ , ಗೋಪಾಲ್ ಹೋಗಿ ೫ ತಿಂಗಳಾತು , ಅವರವ್ವ ೨ ವರ್ಷದ ಮೊದಲ ತೀರಕೊಂಡಾಳ್, ಅವರಪ್ಪ ಸತ್ತು ಒಂದು ತಿಂಗಳಾತು, ಎಡ್ಸ್ ಬಂದಿತ್ತಂತ ತಮ್ಮ ಅವರೆಲ್ಲರ್ಗ್ಯು, ಅವರ ತಮ್ಮ ಒಬ್ಬ ಉಳದಾನ್, ಅವಂಗೂ ಐತಿ ಅಂತ ಹೇಳ್ತಾರ್' , ಒಂದು ಕ್ಷಣ ದಿಗಿಲುಗೊಂಡೆ, ಗೋಪಾಲ್ ಬದುಕುವುದಿಲ್ಲ ಅಂತ ಗೊತ್ತಿತ್ತು, ಆದ್ರೆ ಇಡಿ ಕುಟುಂಬಕ್ಕೆ ಕುಟುಂಬನೆ ಈ ತರ ನಾಶ ಆಯ್ತು ಅಂದ್ರೆ ಇಟ್ಸ್ ರಿಯಲಿ UNFORTUNATE . ಯಾವುದೋ(ಯಾರದೋ ) ಒಂದು ಕ್ಷಣದ ತಪ್ಪಿನಿಂದ ಇಡೀ ಕುಟುಂಬವೇ ನಾಶ ಆಯ್ತು... ಇಂಥಹ ಇನ್ನೆಷ್ಟು ಗೋಪಾಲ್ ಗಳು ನಮ್ಮ ದೇಶದಲ್ಲಿದ್ದಾರೋ, ಎಷ್ಟು ಮುಗ್ಧರು ತಪ್ಪಿಲ್ಲದೆ ಶಿಕ್ಷೆ ಅನುಭವಿಸುತ್ತಿದ್ದರೋ....... ಇದಕ್ಕೆ ಕೊನೆನೆ ಇಲ್ಲವೇ??????

No comments:

Post a Comment