
ಮೊನ್ನೆ ತಾನೇ ನನ್ನ ಫ್ರೆಂಡ್ ಒಬ್ನು ಒಂದ್ ಪಿಚ್ಚರ್ ನೋಡು ಅಂತ suggest ಮಾಡ್ದಾ . ತಮಿಳ್ ಪಿಚ್ಚರ್ , ನನಗೋ ತಮಿಳ್ ಅರ್ಥ ಆಗಲ್ಲ , ಆದ್ರೆ ಭಾವನೆಗಳಿಗೆ ಯಾವ್ ಭಾಷೆ ಇದೆ ಸ್ವಾಮಿ? ಮೂಕರು ಜೀವನ ನಡಸತಾರೆ ಭಾಷೆ ಇಲ್ಲದೆ , ಅಂಥದ್ರಲ್ಲಿ ನನಗೆ ಒಂದ್ ಪಿಚ್ಚರ್ ನೋದಕಾಗಲ್ವ ಅಂತ ಅನ್ಕೊಂಡು , ನೋಡಕ್ ಶುರು ಮಾಡ್ದೆ . ಆ ಪಿಚ್ಚರ್ ಹೆಸರು ವಿನ್ನೈತಾಂಡಿ ವರುವಾಯ? ಅಂದ್ರೆ roughly 'ನನಗೋಸ್ಕರ ಆಕಾಶ ದಾಟಿ ಬರ್ತಿಯಾ'? ಅಂತ.
ಸ್ವಾಮೀ, ವಯಸ್ಸಿಗೆ ಬಂದ ಒಂದು ಮನಸಿಗೆ ಇನ್ನೊಂದು ಮನಸಿನ ಸಾಮಿಪ್ಯ, ಸಾಂಗತ್ಯ , ಪ್ರೀತಿ ಬೇಕು ಅಂತ ಅನ್ಸತ್ತೆ.. ಆದ್ರೆ ಅದು ಸರಿಯಾಗಿ ಸಿಕ್ಕಿರೋರು ತುಂಬಾ rare ಅನ್ಕೊತಿನಿ.. ನನ್ನಂಥ್ಹೊರು ಹಗಲು ಗನಸಲ್ಲೇ ಒಂದು ಪ್ರೇಮ ಸಾಮ್ರಾಜ್ಯ ಕಟ್ಟಿ , ಯಾರ್ ಇಷ್ಟಾನೋ ಅವರನ್ನ ರಾಣಿ ಆಗಿ ಮಾಡಿ ಜೀವನ ನಡಸತಾರೆ, ಇನ್ನು ಕೆಲವೊಬ್ಬರಿಗೆ ಪ್ರೀತಿ ಅಂದ್ರೆ ತೀಟೆ ತೀರಿಸಿಕೊಳ್ಳುವ ಒಂದು ಸರಳ ಮಾರ್ಗ.. ಅದೆಲ್ಲ ಹೋಗ್ಲಿ ಬಿಡಿ.. ಪಿಚ್ಚರ್ ಬಗ್ಗೆ ಮಾತಾಡೋಣ..
ನಾ ಯಾಕ್ ಈ ಪಿಚ್ಚರ್ ಬಗ್ಗೆ ಹೇಳ್ತಾ ಇದೀನಿ ಅಂದ್ರೆ , ನನ್ನ ಸ್ಟೋರಿನು ಚೂರ್ ಅದೇ ತರಾ ಇದೆ.. of course ಅಷ್ಟೊಂದು ಫಿಲ್ಮಿ ಇಲ್ಲ ಬಿಡಿ, ಸಾಂಗ್ , ಡಾನ್ಸ್ , fights ಏನು ಇಲ್ಲ. ಆದ್ರೆ ಹುಡುಗಿ ನನಗಿಂತ ಒಂದೂವರೆ ವರ್ಷ ದೊಡ್ಡವಳು , ಬೇರೆ community (necessary ಟು mention this unnecessary fact), ವೆರಿ cute ,ಸ್ವೀಟ್ , homely ಗರ್ಲ್ . ಶಾರ್ಟ್ ಆಗಿ ಹೇಳಬೇಕುಂದ್ರೆ perfect marriage material.. :-) ಇದೆಲ್ಲ ಓಕೆ , ಆದ್ರೆ ನನ್ನ ಕಥೆ ಒನ್ ವೇ ನೋ , ಟು ವೇ ನೋ ಗೊತ್ತಾಗ್ತಾ ಇಲ್ಲ.. ಮೊದ ಮೊದಲು ಅಷ್ಟಾಗಿ ಅವಳು ಇಷ್ಟ ಆಗ್ತಾ ಇರ್ಲಿಲ್ಲ . ಕೊನೆ ಕೊನೆ ಗೆ ಅವಳೇ ಜಗತ್ತು ಅನ್ಸಕ್ ಶುರು ಆಯ್ತು, ಅಷ್ಟೊತ್ತಗೆ ಕಾಲೇಜ್ ಲೈಫ್ ಮುಗಿದಿತ್ತು. ಕಾಲೇಜ್ ನಿಂದ ಹೊರ ಬಂದು ಮನೆ ಸೇರಕೊಂಡೆ. ಅವಳ ನೆನಪು, ನಗೆ ಕಾಡ್ತಾನೆ ಇತ್ತು.. ಆದರು ಹೆಂಗೋ ಮಾಡಿ ಅವಳ ಸೆಲ್ ನಂಬರ್ ಇಸ್ಕೊಂಡು ಮೆಸೇಜ್ ಮಾಡ್ದೆ, ಅದು ಒಂದ್ ದಿನ ಪಿಚ್ಚರ್ ಮುಗ್ಸಿ ಬಂದ್ ಮೇಲೆ.. ಮೆಸೇಜ್ ನಲ್ಲೆ ಅವಳಿಗೆ ನೀನ್ ನನಗೆ ಇಷ್ಟ ಆಗ್ತಿಯ ಅಂತನು ಹೇಳ್ಬಿಟ್ಟೆ , ಆಗೆನಾಯ್ತೇನೋ ಪಾರ್ಟಿಗೆ , ಮೈ ಮೇಲೆ ಹಾವ ಬಿಟ್ಟಂಗ್ ಆದಕ್ ಶುರು ಮಾಡಿದ್ಲು.. ಅದೇ ಕೊನೆ ಮುಂದೆ ಯಾವಾಗ್ಲೂ ಯಾವದೇ ತರ ಕಾಂಟಾಕ್ಟ್ ಬೇಡ ಅಂದ ಬಿಟ್ಲು.. hmmm , ಸ್ವಲ್ಪ ಬೇಜಾರ್ ಆಯ್ತು , ಆದ್ರೆ ನಾನು ಇಂಥದ್ದಕ್ಕೆಲ್ಲ ತಲೆ ಕೆಡ್ಸ್ಕೊಂದು ಕೂರೋ ಜಾಯಮಾನದವನಲ್ಲ , Just move on ಅಂತ ನಾರ್ಮಲ್ ಆದೆ.. ನನ್ನ ಗುರಿನೂ ಸಾಧಸ್ದೆ.
ಒಂದ್ ವರ್ಷ ಕಳೀತು . ಮತ್ತೆ ಅದ್ಯಾಕೋ ಅವಳ cute ಮುಖ ನನ್ನ ಕಾಡಕ್ ಶುರು ಮಾಡ್ತು. ಮತ್ತೆ ನೋಡೋಣ ಅಂತ facebook ನಲ್ಲಿ ಒಂದು ಮೆಸೇಜ್ ಹಾಕದೆ.. ರಿಪ್ಲೈ ಬಂತು... ಅವಳ ಹೇಳಿದ್ಲು, ನಾನು ಇಷ್ಟ ಪಡ್ತೀನಿ ಅಂತ ಹೇಳಿದ್ದಕ್ಕೆ concious ಆದ್ಳಂತೆ ಅದಕ್ಕೆ ಮಾತಾಡೋದ್ನ ನಿಲ್ಲಿಸಿದ್ಳಂತೆ. ಮತ್ತೆ ಚಾಟಿಂಗ್ ಆರಂಭ ಆಯ್ತು. ಒಮ್ಮೆ ಟ್ರೀಟ್ ಕೊಡ್ಸಿದ್ದೆ, ಆಹಾ ಅದೆಂಥ ಧ್ವನಿ, ಹಾಗೆ ಕೇಳ್ತಾ ನೆ ಇರ್ಬೇಕು ಅಂತ ಅನ್ನ್ಸ್ತಿತ್ತು.. ಒಮ್ಮೆ ವಿನ್ನೈ ತಾಂಡಿ ವರುವಾಯ ? ಅಂತ ಕೇಳ್ದೆ. ಪಾರ್ಟಿ ಮತ್ತೆ ಸೀರಿಯಸ್ ಆಯ್ತು.. te amo ಅಂದೇ, ಅದಂತೂ ಅರ್ಥಾನೆ ಆಗ್ಲಿಲ್ಲ ಅವಳಿಗೆ... ಈಗಲೂ ಮಾತುಕತೆ ನಡೀತಾ ಇದೆ, ಆದ್ರೆ ನನ್ನ ಬಾಳ ನೌಕೆ ಯಲ್ಲಿ ಅವಳನ್ನ ನನ್ನ ಸಂಗಾತಿ ಯಾಗಿ ಪಡಿಯೋ ಭರವಸೆ ಅಂತು ನನಗಿಲ್ಲ. ಯಾಕಂದ್ರೆ chetan bhagat's "Two States" can happen only in his book!
No comments:
Post a Comment